ಸುಜನ ಸಮಾಜ ಸಂಸ್ಥೆಯ ಮುಂದಿನ ವರ್ಷದ ಪ್ರತಿಷ್ಠಿತ ಕಾರ್ಯಕ್ರಮವಾದ "ಪ್ರತಿಭೋತ್ಸವ-2019" ಕ್ಕೆ ಚಾಲನೆಯನ್ನು ದಿನಾಂಕ 11-11-18ರಂದು ಸಂಸ್ಥೆಯ 3ನೇ ವಾರ್ಷಿಕೋತ್ಸವದಂದು ನೀಡಲಾಯಿತು. ಆದಿನ ಚಾಲನೆಯನ್ನು ವಿದ್ಯುಕ್ತವಾಗಿ ನೀಡಬೇಕಿದ್ದ ನಮ್ಮ ಸನ್ಮಾನ್ಯ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕರ್ನಾಟಕ ರಾಜ್ಯ ವಾಣಿಜ್ಯ ಹಾಗು ಕ್ಯಗಾರಿಕ ಮಹಾ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರೂ. ಖ್ಯಾತ ಲೆಕ್ಕ ಪರಿಶೆೋಧಕರೂ ಮತ್ತು ವಿಶಾಲಹ್ರದಯಿಗಳು ಆಗಿರುವ ಅಂ.ಏ.ರವಿರಮರು ಅನಿವಾರ್ಯ ಪರಿಸ್ಥಿತಿಗಳಿಂದ ಸಮಾರಂಭದಲ್ಲಿ ಹಾಜರಿರಲಿಲ್ಲವಾಗಿ, ಸಂಸ್ಥೆಯನ್ನೂ, ಧರ್ಮದರ್ಶಿಗಳನ್ನು, ದಾನಿಗಳನ್ನೂ, ಫಲಾನುಭವಿಗಳನ್ನೂ, ಆಶಿರ್ವದಿಸಲು ಆಗಮಿಸಿದ್ದ ಹಲಸೂರಿನಲ್ಲರುವ ಶ್ರೀರಾಮಕ್ರಷ್ಣಮಠದ ಅಧ್ಯಕ್ಷರಾದ ಶ್ರೀ ಶ್ರೀ ತತ್ವಾನಂದ ಸ್ವಾಮೀಜಿ ಯವರೆ ಚಾಲನೆ ನೀಡಿ ಆಶೀರ್ವದಿಸಿದರು. ಈ ಮಹತ್ಕಾರ್ಯಕ್ಕಾಗ್ ಸ್ಥಳದಲ್ಲಿ ಹಾಜರಿದ್ದ ಸಂಸ್ಥೆಯ ಶ್ರೇಯೋಭಿಲಾಷಿಗಳು ಕೊಡುಗೆ ನೀಡಲು ಸ್ವಯಂಪ್ರೀರಿತರಾಗಿ ಮುಂದೆ ಬಂದರು. ಆ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ರಾ.ಕ್ರ.ಶ್ರೀಧರಮೂರ್ತಿಯವರು ಸಹಾಯವನ್ನು\ಧೇಣಿಗೆಯನ್ನು ಮುಂದೆ ಪಡೆಯುವುದಾಗಿಯೂ, ಸ್ಥಳದಲ್ಲಿ ಎಲ್ಲರೂ ಕಿರುಕಾಣಿಕೆಗಳನ್ನು ನೀಡಿ ಒಂದೇ ರಸೀದಿಯ್ನು "ಸುಜನ" ರ ಹೆಸರಿನಲ್ಲಿ ದಾಖಲಿಸಲು ಅಭಿಪ್ರಾಯ ಪಟ್ಟರು. ಅದರಂತೆ ದಾನಿಗಳು ಕಾಣಿಕೆ ನೀಡಿದರು ಸಂಸ್ಥೆಯು ನಡೆದುಕೋಂಡಿದೆ.

welcome

ಆನಂತರ ಕಾರ್ಯಕ್ರಮಕ್ಕೆ ಅವಶ್ಯವಾದ ಸಿದ್ಧತೆಗಳನ್ನು ಧರ್ಮದರ್ಶಿಗಳು ಮಾಡುತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೆ ತಾಂತ್ರಿಕ ಸಮೀತಿಯನ್ನು ರಚಿಸಲಾಗಿದೆ.ಅದರಂತೆ ಹಿರಿಯನಾಗರೀಕರ, ಸಂಸ್ಥೆಯ ದಾನಿಗಳ ಸೇವಬಳಗದ ಸದಸ್ಯರ ಸಭೆಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ವಿಶ್ವವಿದ್ಯಾಲಯಗಳ ಕುಲಸಚಿವರುಗಳನ್ನು ಭೇಟಿಯಾಗಿ ಸಮಾರಂಭಕ್ಕೆ ಅವಶ್ಯವಾದ ಮಾಹಿತಿಗಳಬಗ್ಗೆ ಚರ್ಚೆ ನಡೆಸಲಾಗಿದೆ. ಇಷ್ಟರಲ್ಲೇ ಸಮಾರಂಭ ನಡೆಯಬೇಕಾದ ಸ್ಥಳವನ್ನು ನಿಶ್ಚಯಿಸಲಾಗುವುದು. ಈಗ ನಮಗೆ ದೊರೆತಿರುವ ಮಾಹಿತಿಯಂತೆ ನಮ್ಮ ರಾಜ್ಯದಲ್ಲಿ ಇಪ್ಪತ್ತೆಂಟು ವಿಶ್ವವಿದ್ಯಾಲಯಗಳು ಕಾರ್ಯನಿರತವಾಗಿವೆ. ಅವುಗಳು ಒಟ್ಟಾರೆಯಾಗಿ ಸುಮಾರು ನಾಲ್ಕು ನೂರು ತರಹೆಯ ಪದವಿಗಳನ್ನು ನೀಡುತ್ತಿವೆ. ಇದರಿಂದಲಾಗಿ ನಾವು ಪ್ರತಿಭೋತ್ಸವ-19 ರಲ್ಲಿ ಸುಮಾರು ನಾಲ್ಕುನೂರು ವಿದ್ಯಾರ್ಥಿ\ವಿದ್ಯಾರ್ಥಿನಿಯರಿಗೆ ಅಭಿನಂದನಾಪೂರ್ವಕ ಪುರಸ್ಕಾರ ನೀಡಬೇಕಾಗಿದೆ ಈ ನಡುವೆ ಪ್ರತಿ ವಿದ್ಯಾರ್ಥಿಗೆ ಅಬಿನಂದನಾಪೂರ್ವಕ ಸತ್ಕಾರ ಮಾಡಲು ದೇಣಿಗೆಯಾಗಿ ಆರು ಸಾವಿರ ರುಪಾಯಿಗಳನ್ನು ಸಹ್ರದಯಿಗಳಿಂದ ಪಡೆಯಲು ಸಂಸ್ಥೆ ತೀರ್ಮಾನಿಸಿದೆ ಮತ್ತು ಸಹ್ರದಯರನ್ನು ದೇಣಿಗೆ ನೀಡಲು ಕೋರಿದೆ. ಕೋರಿಕೆಗೆ ಮನ್ನಣೆ ನೀಡಿ ಈಗಾಗಲೆ ಕೆಲವರು ದೇಣಿಗೆ ಸಹ ನೀಡಿದ್ದಾರೆ.

ಸುಜನ ವಿಜ್ಞಾನ ಭಂಡಾರ

ನಮ್ಮ ಸಂಸ್ಥೆಯ ಅವಿಭಾಜ್ಯ ಭಾಗವಾದ ಅಂದರೆ ಒಂದು ವಿಭಾಗವಾದ ಸುಜನ ವಿಜ್ಞಾನ ಭಂಡಾರದ ಮುಖಾಂತರ ನೂರಾರು ತಾಂತ್ರಿಕ ಹಾಗು ಆರೋಗ್ಯ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಪಠ್ಯಪುಸ್ತಕಗಳನ್ನು ಕಳೆದ ಎರಡು ವರ್ಷಗಳಿಂದ ಒದಗಿಸುತ್ತಿರುವ ವಿಷಯ ಎಲ್ಲರಿಗು ತಿಳಿದಿದೆ. ಈಚೆಗೆ ಬೆಂಗಳೂರಿನ ಅಒಖಋಖಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ನೀಡಿದ ನಂತರ, ಅವರಿಗಾಗಿ ನಾವು ಮಾಡಿದ ವ್ಯವಸ್ಥೆಯಂತೆಯೆ, ತಮ್ಮ ವಿದ್ಯಾರ್ಥಿಗಳಿಗು ಮಾಡಿಕೊಡಲು ಅನೇಕ ವಿದ್ಯಾಸಂಸ್ಥೆಗಳು ಕೇಳಿವೆ. ಅವರ ಕೋರಿಕೆಯಂತೆ ಈಗಾಗಲೆ ಬೀಜಾಪುರ, ಮಂಗಳೂರು, ಚಾಮರಾಜನಗರದ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರೊಂದಿಗೆ ಸಂಪರ್ಕ ಹೊಂದಿ ಮುಂದುವರೆಯುತ್ತಿದ್ದೇವೆ. ನಮ್ಮ ಪ್ರಯತ್ನಗಳಿಗೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ನಾವು ಬಯಸಿದಂತೆ ಈ ಯೋಜನೆಯಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಅನುಕೂಲ ಪಡೆಯುವ ದಿನ ದೂರವಿಲ್ಲ. ಈ ಪ್ರಯತ್ನ ಯಶಸ್ವಿಯಾಗಲು ನಮ್ಮ ಹಿತೈಷಿಗಳ ಹಾಗು ದಾನಿಗಳ ಸಹಕಾರ ಬಹಳ ಮುಖ್ಯ. ಬನ್ನಿ ಈ ಜ್ನಾನ ಯಜ್ಞದಲ್ಲಿ ಮುಂದುವರೆಯೋಣ.